ರಾಷ್ಟ್ರೀಯ ಕಂಪ್ಯೂಟರ್ ಸಾಕ್ಷರತಾ ಸಮಿತಿ ಕರ್ನಾಟಕ, ಕೇರಳ, ಮಹಾರಾಷ್ಟ್ರದಲ್ಲಿ ಸಾವಿರಕ್ಕೂ ಅಧಿಕ ಕೇಂದ್ರಗಳನ್ನು ಹೊಂದಿದೆ. ನಮ್ಮ ಕೇಂದ್ರಗಳು ನಾಡಿನಾದ್ಯಂತ ಚಿರಪರಿಚಿತ. ಬೆಂಗಳೂರು, ಮೈಸೂರು, ಮಂಡ್ಯ, ಕೋಲಾರ, ಕೊಡಗು, ದಕ್ಷಿಣಕನ್ನಡ, ಉಡುಪಿ, ಉತ್ತರಕನ್ನಡ, ಕೊಪ್ಪಳ, ಶಿವಮೊಗ್ಗ, ಚಿತ್ರದುರ್ಗ, ಬಾಗಲಕೋಟೆ, ಚಿಕ್ಕಬಳ್ಳಾಪುರ, ಹಾವೇರಿ, ಚಿಕ್ಕಮಂಗಳೂರು, ದಾವಣಗೆರೆ, ದಾರವಾಡ, ಗದಗ, ಬೆಳಗಾವಿ, ರಾಯಚೂರು, ಚಾಮರಾಜನಗರ, ವಿಜಯನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಹಾಸನ, ಗುಲ್ಬರ್ಗ, ಯಾದಗಿರಿ ಇತ್ಯಾದಿ ಎಲ್ಲಾ ಜಿಲ್ಲೆಗಳಲ್ಲಿ ಪ್ರಸಿದ್ದಿ ಪಡೆದಿದೆ.
ಹೊಸ ಪ್ರಾಂಚೈಸಿಗಳು ಮತ್ತು ಕೇಂದ್ರಗಳನ್ನು ತೆರೆಯಲು ಅಗತ್ಯವಾದ ನಿಯಮಗಳು ಮತ್ತು ಷರತ್ತುಗಳು :
ರಾಷ್ಟ್ರೀಯ ಕಂಪ್ಯೂಟ್ ಸಾಕ್ಷರತಾ ಸಮಿತಿಯ ಉದ್ದೇಶಗಳು ಮತ್ತು ಇತರ ವೈಶಿಷ್ಟ್ಯಗಳು ಮತ್ತು ಪ್ರಯೋಜನಗಳು :
ಸಮಿತಿಯು NDLM, ಹಾಗೂ CMKKY, PMKVY ಇದರ ಪಾಲುದಾರ ಸಂಸ್ಥೆಯಾಗಿದೆ.
ನಮ್ಮಲ್ಲಿ ಮೂರು ವಿಭಾಗೀಯ ಸಂಸ್ಥೆಗಳಿವೆ. 1. ರಾಷ್ಟ್ರೀಯ ಕಂಪ್ಯೂಟರ್ ಸಾಕ್ಷರತಾ ಸಮಿತಿ 2. ರಾಷ್ಟ್ರೀಯ ಕೌಶಲ್ಯ ಮಿಷನ್. 3. ರಾಷ್ಟ್ರೀಯ ಸಾಕ್ಷರತಾ ಸಮಿತಿ ಮೂಲಕ ವಿವಿಧ ಕೋರ್ಸುಗಳನ್ನು ಒದಗಿಸುತ್ತಿದೆ. ರಾಷ್ಟ್ರೀಯ ಕೌಶಲ್ಯ ಮಿಷನ್ ಮೂಲಕ ವಿವಿಧ ಕೌಶಲ್ಯ ತರಬೇತಿಯನ್ನು ನೀಡುತ್ತದೆ ಹಾಗೂ ಸಾಕ್ಷರತಾ ಸಮಿತಿಯ ಮೂಲಕ ಗ್ರಾಮೀಣ ಮತ್ತು ನಗರ ಯುವಜನತೆಗೆ ತರಬೇತಿ ನೀಡುತ್ತದೆ. ನರ್ಸರಿ ಶಿಕ್ಷಕರ ತರಬೇತಿ, ಮೊಂಟೆಸ್ಸರಿ ಶಿಕ್ಷಕರ ತರಬೇತಿ ಹಾಗೆಯೇ ಮಣಿಪಾಲ ಗ್ರೂಪ್, ಮಣಿಪಾಲ ಮೂಲಕ ಸಿಇಟಿ, ನೀಟ್, ಜೆಇಇ ಕೋಚಿಂಗ್ ತರಬೇತಿಯನ್ನು ನೀಡುತ್ತಿದ್ದೇವೆ.
ನಾವು ಇನ್ನೊಂದು ವಿಭಾಗವನ್ನು ಹೊಂದಿದ್ದೇವೆ. ಅದನ್ನು ಇತ್ತೀಚೆಗೆ ಖಅSS ಇಂಗ್ಲೀಷ್ ಅಕಾಡೆಮಿ ಎಂದು ಹೆಸರಿಸಲಾಗಿದೆ. ಅತೀ ಕಡಿಮೆ ಅವಧಿಯಲ್ಲಿ ಇಂಗ್ಲೀಷ್ ಮಾತನಾಡುವ ಜ್ಞಾನವನ್ನು ಒದಗಿಸುವುದು. ಸದ್ಯದಲ್ಲೇ ಆನ್ಲೈನ್ ಇಂಗ್ಲೀಷ್ ತರಬೇತಿಗಳನ್ನು ಆರಂಭವಾಗಲಿವೆ.
ನಮ್ಮ ವಿವಿಧ ಕೇಂದ್ರಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಈಗಾಗಲೇ ನಮ್ಮ ಕೇಂದ್ರಗಳಲ್ಲಿ ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಧ್ಯಯನ ಮಾಡಿದ್ದು, ಅದರಲ್ಲಿ 70% ಯುವಕರು ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗವನ್ನು ಪಡೆದಿದ್ದಾರೆ.
ನಮ್ಮ ERP ಸಾಫ್ಟವೇರ್ ಮೂಲಕ ನಮ್ಮ ವಿದ್ಯಾರ್ಥಿಗಳನ್ನು ನೋಂದಾಯಿಸಿ ಗುರುತಿನ ಚೀಟಿಗಳನ್ನು ಒದಗಿಸಲಾಗುವುದು.
ನಾವು ಸರಕಾರದಿಂದ ಗುರುತಿಸಲ್ಪಟ್ಟ ದೀರ್ಘಾವಧಿ ಮತ್ತು ಅಲ್ಪಾವಧಿ ತಾಂತ್ರಿಕ ಕೋರ್ಸುಗಳನ್ನು ಸಹ ನಡೆಸುತ್ತೇವೆ. ನಮ್ಮ ಸಂಸ್ಥೆಯು ರಾಷ್ಟ್ರೀಯ ತಾಂತ್ರಿಕ ಶಿಕ್ಷಣ ಅಭಿವೃದ್ಧಿ ಏಜೆನ್ಸಿ ಎಂದು ಅಒಏಏಙ, Pಒಏಗಿಙ ಮೂಲಕ ಗುರುತಿಸಲ್ಪಟ್ಟಿದೆ. ನಾವು ಎಲೆಕ್ಟ್ರೀಷಿಯನ್, ಮೊಬೈಲ್ ರಿಪೇರಿ, ಟಿವಿ ಮತ್ತು ಫ್ರಿಡ್ಜ್ ರಿಪೇರಿ, ಫ್ಯಾಶನ್ ಟೆಕ್ನಾಲಜಿ (ಟೈಲರಿಂಗ್) ಡಾಟಾ ಎಂಟ್ರಿ, ಸಾಫ್ಟ್ಸ್ಕಿಲ್ಸ್ ರೋಬೋಟಿಕ್, ಎಂಬೆಡೆಡ್ ಮತ್ತು ಡ್ರೋನ್ ಮುಂತಾದ ಕೋರ್ಸುಗಳನ್ನು ನಡೆಸುತ್ತಿದ್ದೇವೆ. ಮೇಲಿನ
ಕೋರ್ಸುಗಳನ್ನು ಪ್ರಾರಂಭಿಸಲು ಯಾವುದೇ ಕೇಂದ್ರಗಳು ಆಸಕ್ತಿ ಹೊಂದಿದ್ದರೆ ನಿಮಗೆ ನಮ್ಮ ಖಅSS ನಿಂದ ಸರಕಾರದ ನಿಯಮಾವಳಿಯಂತೆ ಅನುಮತಿ ನೀಡಲಾಗುತ್ತಿದೆ.
ನಮ್ಮ ವಿವಿಧ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳು ಉದ್ಯೋಗದ ಉದ್ದೇಶಕ್ಕಾಗಿ ನಾವು ‘ಉದ್ಯೋಗದರ್ಶನ್ ಬ್ಯೂರೋ’ದಲ್ಲಿ ಅವರ ಹೆಸರನ್ನು ನಮೂದಿಸುತ್ತೇವೆ.
ಎಸ್ಸಿ/ಎಸ್ಟಿ ಮತ್ತು ಓಬಿಸಿ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಹಾಗೂ ಸಾಂದರ್ಭಿಕವಾಗಿ ಸರಕಾರದ ಇಲಾಖೆಯಿಂದ ಶಿಕ್ಷಣಕ್ಕೆ ರಾಜ್ಯ ಮತ್ತು ಕೇಂದ್ರ ಸರಕಾರದ ಕೆಲವು ಸವಲತ್ತುಗಳನ್ನು ಕಲ್ಪಿಸಿ ಕೊಡಲಾಗುವುದು.
ನಮ್ಮ ದೇಶದ ಇತರ ರಾಜ್ಯಗಳಲ್ಲಿ ಹೊಸ ಕೇಂದ್ರಗಳನ್ನು ತೆರೆಯಲು ನಾವು ಆಸಕ್ತಿ ಹೊಂದಿದ್ದೇವೆ. ಶ್ರೀಲಂಕಾ ಮತ್ತು ನೇಪಾಳದಲ್ಲಿ ಶಾಖೆಗಳನ್ನು ತೆರೆಯಲು ನಮಗೆ ಉತ್ತಮವಾದ ಪ್ರಸ್ತಾಪವನ್ನು ಪಡೆದುಕೊಂಡಿದ್ದೇವೆ. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕಂಪ್ಯೂಟರ್ ಸಾಕ್ಷರತಾ ಕೇಂದ್ರವನ್ನು ಪ್ರಾರಂಭಿಸಲು ಹೆಚ್ಚು ವಿದ್ಯಾವಂತ ಯುವ ಜನತೆ ಮುಂದೆ ಬರುತ್ತಿದ್ದಾರೆ ಎಂದು ನಿಮಗೆ ತಿಳಿಸಲು ನಾವು ತುಂಬಾ ಸಂತೋಷ ಪಡುತ್ತೇವೆ. ಹೊಸ ಕೇಂದ್ರವನ್ನು ಪ್ರಾರಂಭಿಸಲು ನೀವು ಅರ್ಜಿಗಳನ್ನು ಕಳುಹಿಸಿದಾಗಲೆಲ್ಲಾ ಮಾರ್ಗದರ್ಶನ ನೀಡಲು ಮತ್ತು ಅವರಿಗೆ ಹೊಸ ಕೇಂದ್ರಗಳನ್ನು ಪ್ರಾರಂಭಿಸಲು ಸರಿಯಾದ ಸೂಚನೆಗಳನ್ನು ತಿಳಿಸಲು ಸಂತೋಷ ಪಡುತ್ತೇವೆ. ‘ರಾಷ್ಟ್ರೀಯ ಕಂಪ್ಯೂಟರ್ ಸಾಕ್ಷರತಾ ಸಮಿತಿ’ ಸ್ವಯಂ ಉದ್ಯೋಗ ಯೋಜನೆಯಲ್ಲಿ ಆಸಕ್ತಿ ಹೊಂದಿದ್ದವರಿಗೆ ಮೊದಲ ಆದ್ಯತೆ ನೀಡುತ್ತೇವೆ. ನಾವು ವಿವಿಧ ಶಿಕ್ಷಣ ಸಂಸ್ಥೆಗಳು ಮತ್ತು ಇತರ ಸಾಮಾಜಿಕ ಮತ್ತು ಸಾಂಸ್ಕøತಿಕ ಕಲ್ಯಾಣ ಸಂಘಗಳಿಂದ ಅರ್ಜಿ ಪರಿಗಣಿಸುತ್ತೇವೆ.