Advanced Course

The rastriya computer saksharatha samithi excutive director met manjeshwar MLA A.K.M ashraf

ರಾಷ್ಟ್ರೀಯ ಕಂಪ್ಯೂಟರ್ ಸಾಕ್ಷರತಾ ಸಮಿತಿ ಇದರ ಕಾರ್ಯ ನಿರ್ವಾಹಕ ನಿರ್ದೇಶಕರಾದ ಡಾ. ಪ್ರವೀಣ್ ರಾಜ್ ಎಸ್ ರಾವ್ ಹಾಗೂ ತಂಡದವರು, ಕಾಸರಗೋಡು ಗಡಿನಾಡಿನ ಅಪ್ಪಟ ಕನ್ನಡಿಗ ಹಾಗೂ ಮಂಜೇಶ್ವರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಅಶ್ರಫ್ ಅವರನ್ನು ಭೇಟಿಮಾಡಿ ಕನ್ನಡ,ತುಳು ಭಾಷೆಯ ಬಗೆಗೆ ಮನವಿ ಸಲ್ಲಿಸಿದ ಸಂದರ್ಭ

December 7, 2023

The rastriya computer saksharatha samithi excutive  director met manjeshwar MLA A.K.M ashraf

image

ರಾಷ್ಟ್ರೀಯ ಕಂಪ್ಯೂಟರ್ ಸಾಕ್ಷರತಾ ಸಮಿತಿಗೆ  ಇದರ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ| ಪ್ರವೀಣ್ ರಾಜ್ ಎಸ್. ರಾವ್ ಹಾಗೂ ನಿಯೋಗದವರು ಕಾಸರಗೋಡು ಗಡಿನಾಡಾದ ಮಂಜೇಶ್ವರದ ಜನಪ್ರಿಯ ಕನ್ನಡಿಗ ಶಾಸಕರಾದ ಸನ್ಮಾನ್ಯ ಎ. ಕೆ. ಎಂ ಅಶ್ರಫ್ ಅವರನ್ನು ಭೇಟಿ ಮಾಡಿ ಕನ್ನಡ, ತುಳು ಭಾಷೆಯ ಪ್ರಗತಿ ಹಾಗೂ ಬೆಳವಣಿಗೆ ಬಗೆಗೆ ಚರ್ಚಿಸಿ ಕರ‍್ಯಕ್ರಮವನ್ನು ಸಂಘಟಿಸುವ ಕುರಿತಾಗಿ ಹಾಗೂ ಕೇರಳ ಸರ್ಕಾರದಲ್ಲಿನ ಭಾಷೆಗಳ ಅಭಿವೃದ್ಧಿ ವಿಚಾರದಲ್ಲೂ, ಎಲ್ಲಾ ರೀತಿಯಿಂದ ನೆರವು ನೀಡಬೇಕೆಂದು ವಿನಂತಿಸಿ ಮನವಿಯನ್ನು ಸಮರ್ಪಿಸಿದರು. 
ನಿಯೋಗದಲ್ಲಿ ಶ್ರೀ ವಿಕಾಸ್ ವಿ.ಎಸ್., ಧನರಾಜ್ ಆಚಾರ್ಯ, ಶ್ರೀ ರಾಜ್ ಮತ್ತೀತರರು ಇದ್ದರು.
ಸನ್ಮಾನ್ಯ ಶಾಸಕರು, ಕಾರ್ಯಕ್ರಮವನ್ನು ಸಂಘಟಿಸುವ ನಿಟ್ಟಿನಲ್ಲಿ ತಾನು ಮುಂದಾಗಲಿರುವೆನೆoದು ಕಾರ್ಯಕ್ರಮದ ಬಗ್ಗೆ ತಿಳಿಸಿದರು.