ಸನ್ಮಾನ್ಯ ಮುಖ್ಯಮಂತ್ರಿಗಳಿಂದ ತುಳು ತಂತ್ರಾಂಶ ತೌಳವ 5.0 ಬಿಡುಗಡೆ

February 20, 2023

ಸನ್ಮಾನ್ಯ ಮುಖ್ಯಮಂತ್ರಿಗಳಿಂದ ತುಳು ತಂತ್ರಾಂಶ ತೌಳವ 5.0 ಬಿಡುಗಡೆ

ತುಳುವಿನ ಪ್ರಪ್ರಥಮ ಕಂಪ್ಯೂಟರ್ ಲಿಪಿ ತೌಳವ ತಂತ್ರಾಶದ 5.0 ನೇ  ಆವೃತ್ತಿಯನ್ನು ಕರ್ನಾಟಕದ ಮುಖ್ಯಮಂತ್ರಿಗಳಾದ  ಸನ್ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿಯವರು ಬಿಡುಗಡೆಗೊಳಿಸಿದರು.   ಚಿತ್ರದಲ್ಲಿ ಶಾಸಕರಾದ ಶ್ರೀ ಉಮಾನಾಥ ಎ ಕೋಟ್ಯಾನ್,  ತಂತ್ರಜ್ಞರಾದ ಡಾ. ಪ್ರವೀಣ್ ಎಸ್ ರಾವ್, ಶ್ರೀ ಸತ್ಯಶಂಕರ್ ಬೇಂದ್ರೊಡು, ಶ್ರೀಮತಿ ನಿರ್ಮಲ ಪಿ ರಾವ್, ವಿಕಾಸ್ ಕೋಟ್ಯಾನ್ ಅವರು ಉಪಸ್ಥಿತರಿದ್ದರು. 

 

ರಾಷ್ಟ್ರೀಯ ಕಂಪ್ಯೂಟರ್ ಸಾಕ್ಷರತಾ ಸಮಿತಿಯ ವತಿಯಿಂದ ತಯಾರಿಸಲ್ಪಟ್ಟ  ತುಳುವಿನ ಪ್ರಪ್ರಥಮ ಕಂಪ್ಯೂಟರ್ ಲಿಪಿ ತೌಳವ ತಂತ್ರಾಶದ 5.0 ನೇ  ಆವೃತ್ತಿಯನ್ನು ಕರ್ನಾಟಕದ ಮುಖ್ಯಮಂತ್ರಿಗಳಾದ  ಸನ್ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿಯವರು ತನ್ನ ಕೃಷ್ಣ ಗೃಹ ಕಚೇರಿಯಲ್ಲಿ ಮೂಡಬಿದ್ರೆಯ ಶಾಸಕರಾದ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಪೂರ್ವಾಧ್ಯಕ್ಷರಾಗಿದ್ದ ಮಾನ್ಯ ಶ್ರೀ ಉಮಾನಾಥ ಎ ಕೋಟ್ಯಾನ್ ಅವರ ಸಮ್ಮುಖದಲ್ಲಿ ಬಿಡುಗಡೆಗೊಳಿಸಿದರು.   

ತುಳು ಭಾಷಾ ಸಂಸ್ಕೃತಿ ಮತ್ತು ತುಳು ಲಿಪಿ ಸಂಶೋಧಕರಾದ ಡಾ. ಪ್ರವೀಣ್ ಎಸ್ ರಾವ್ ಹಾಗೂ ತಂತ್ರಜ್ಞರಾದ ಶ್ರೀ ಸತ್ಯಶಂಕರ್ ಬೇಂದ್ರೊಡು, ಶ್ರೀಮತಿ ನಿರ್ಮಲ ಪಿ ರಾವ್, ವಿಕಾಸ್ ಕೋಟ್ಯಾನ್ ಅವರು ಉಪಸ್ಥಿತರಿದ್ದರು.

2008 ರಲ್ಲಿ ತುಳುವಿನ ಆಧುನಿಕ ಪಿತಾಮಹ ಎಂದು ಕರೆಯಲ್ಪಟ್ಟಿರುವ ಡಾ ವೆಂಕಟರಾಜ ಪುಣಿಂಚಿತ್ತಾಯರವರ  ಸಲಹೆಯ ಮೇರೆಗೆ ತುಳು ಲಿಪಿಗೆ ಗಣಕಯಂತ್ರದ ಸ್ಪರ್ಶ ನೀಡಲು ಸಮಿತಿಯ ನಿರ್ದೇಶಕರಾದ ಡಾ.ಪ್ರವೀಣರಾಜ್ ಎಸ್ ರಾವ್  ಅವರು ನಿರ್ಧರಿಸಿ,  ತುಳು ಟೈಪಿಂಗ್ ತಂತ್ರಾಂಶ ಲಿಪಿ ‘ತೌಳವ 1.0’ ವನ್ನು  ಅಭಿವೃದ್ಧಿಪಡಿಸಿದ್ದರು.  ಇದೇ ಸಂಧರ್ಭದಲ್ಲಿ ಡಾ.ರಾಜೇಶ್ ಆಳ್ವ, ಬದಿಯಡ್ಕ ಅವರ ನೇತೃತ್ವದ  “ತುಳು ಅಯನೋ” ಬದಿಯಡ್ಕ ಪ್ರಕಾಶನಗೊಳಿಸಿ ತುಳು ಸಂಶೋಧಕರಾದ ಡಾ. ರಾಧಾಕೃಷ್ಣ ಬೆಳ್ಳೂರು  ಬರೆದ    “ತೌಳವ ಗಣಕೀಕೃತ ತುಳುಲಿಪಿ” ಎಂಬ ಪುಸ್ತಕವನ್ನು ಉಜಿರೆಯಲ್ಲಿ ನಡೆದ “ವಿಶ್ವ ತುಳು ಸಮ್ಮೇಳನ ೨೦೦೯” ರಲ್ಲಿ ಡಾ ವೀರೇಂದ್ರ ಹೆಗ್ಗಡೆಯವರ ದಿವ್ಯಹಸ್ತದಿಂದ ಬಿಡುಗಡೆಗೊಳಿಸಿದ್ದರು.ಹಾಗೂ ಇದೇ ಸಂಧರ್ಭದಲ್ಲಿ ಪ್ರಾಯೋಗಿಕವಾಗಿ  ತುಳುವಿನ ತೌಳವ ಬೆರಳಚ್ಚು ತಂತ್ರಾಂಶದ ಮೂಲಕ ಡಾ. ಹೆಗ್ಗಡೆಯವರ ಸಹಿ ಇರುವ ಪ್ರಮಾಣ ಪತ್ರವನ್ನು ಸಾರ್ವಜನಿಕರಿಗೆ ನೀಡಲಾಗಿತ್ತು ಇದು ತುಳುವಿನ ಇತಿಹಾಸದಲ್ಲಿ ಒಂದು ಮೈಲುಗಲ್ಲಾಯಿತು 

 ಆ ಬಳಿಕ ಅದೇ ವರುಷ ಅಂದಿನ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದ ಡಾ ಪಾಲ್ತಾಡಿ ರಾಮಕೃಷ್ಣ ಆಚಾರ್ ಅವರ ದಿವ್ಯಹಸ್ತದಿಂದ ಅಧಿಕೃತವಾಗಿ ತುಳುಲಿಪಿ ತಂತ್ರಾಂಶ’ ತೌಳವ 1.0 ನ್ನು ಬಿಡುಗಡೆಮಾಡಲಾಗಿತ್ತು ಈ ಲಿಪಿಗಳು  ಹಾಗು ತಂತ್ರಾಂಶಕ್ಕೆ ಕೇರಳ ಹಾಗೂ ಕರ್ನಾಟಕ ರಾಜ್ಯದ ಎರಡೂ ತುಳು ಅಕಾಡೆಮಿಗಳು ಮಾನ್ಯತೆಯನ್ನು ನೀಡಿದೆ   ಇದರಲ್ಲಿ ನಮ್ಮ ತಂಡದವರಾದ ಶ್ರೀ ಸತ್ಯಶಂಕರ್ ಬೇಂದ್ರೋಡು, ಶ್ರೀ ಪ್ರದೀಪ್ ಡಿ ಸೋಜ, ಶ್ರೀಉದಯಾನಂದ ಬರ್ಕೆ, ಶ್ರೀಮತಿ ನಿರ್ಮಲ ರಾವ್ ಹಾಗೂ ಶ್ರೀಮತಿ  ಗೀತಾ ಲಕ್ಷ್ಮಣ ಗೌಡ, ಶ್ರೀ  ವಿಕಾಸ್ ಕೋಟ್ಯಾನ್ ಮೊದಲಾದವರು ಸಹಕರಿಸಿದ್ದಾರೆ 

ಇದೀಗ  ಬಿಡುಗಡೆಗೊಂಡ ತುಳು ಟೈಪಿಂಗ್ ತಂತ್ರಾಂಶವು ೫.೦ ಆಗಿದ್ದು ಇದನ್ನು ಆಸಕ್ತರು www.tululipi.com  ಮೂಲಕ ಬಳಸಿಕೊಳ್ಳಬಹುದು. ಈ ಅಂತರ್ಜಾಲಮನೆ  (ವೆಬ್ಸೈಟ್) ಯ ಮೂಲಕ ವಿವಿಧ ಶೈಲಿಯ ತುಳು ಲಿಪಿಗಳನ್ನು ಟೈಪ್ ಮಾಡಬಹುದು ಹಾಗೂ ತುಳುವನ್ನು ಇತರ ತಂತ್ರಾಂಶ (Software) ಗಳಲ್ಲಿ ಸಹ ಬಳಸಬಹುದಾಗಿದೆ.